ಮುಖದ ತುಂಬಾ ನಗು ಅಂದ್ರೆ ಇದೇನಾ?
ಮುಖದ ತುಂಬಾ ನಗು ಅಂದ್ರೆ ಇದೇನಾ?
ಈ 'ಚಿತ್ರ ಲೇಖನ' ಮೊದಲು ಪ್ರಕಟವಾಗಿದ್ದು ಇಲ್ಲಿ- Readoo Kannada
ಅಲ್ಲೆಲ್ಲೋ ತರಗತಿಯ ಹತ್ತಾರು ಮಕ್ಕಳೊಂದಿಗೆ ಒಂದಾಗಿದ್ದ ನಾವು, ನಾನೊಬ್ಬ ಸಾಧಕನಾಗಬೇಕು, ಎಲ್ಲರಿಂದ ಎತ್ತರದಲ್ಲಿ ನಿಲ್ಲಬೇಕು, ಬೆಳೆಯಬೇಕು ಎನ್ನುತ, ದೊಡ್ಡ ಖುಷಿಗಳಲೋಕದ ಹುಡುಕಾಟದ ಹೋರಾಟಕ್ಕೆ ಬಿದ್ದಿದ್ದೇವೆ. ಕ್ಲಾಸ್ ಅಲ್ಲಿ ಮೇಡಂ ನೋಟ್ಸ್ ಕೊಡುವಾಗ ಎಲ್ಲರೂ ಬರೀತಿದ್ರೆ, ಎಲ್ಲೋ ಒಂದು ಉತ್ತರ ನಾವು ಗಟ್ಟಿಯಾಗಿ ಹೇಳಿದ್ರೆ, ಏನೋವರ್ಲ್ಡ್ ಕಪ್ ಗೆದ್ದ ಹಾಗಿನ ಸಂತೋಷ. ಪಕ್ಕದಲ್ಲಿರೋ ಗೆಳೆಯ “ಏನೋ ಮಾರಾಯ ಎಲ್ಲಾ ಗೊತ್ತಾ??!!” ಅಂತ ಪಿಳಿ ಪಿಳಿ ಕಣ್ಣು ಮಾಡಿ ಕೇಳಿದಾಗ, “ಇಲ್ಲ ಮಾರಾಯಾಇದೊಂದು ಮಾತ್ರ” ಅಂತ ಹೇಳಿದ್ರು, ಒಳಗೊಳಗೇ ಏನೋ ಗರ್ವ, ಆನಂದ. ಗೆಳೆಯರೆಲ್ಲ ಕೂತು ಒಂದೇ ಹುಡುಗಿಯ ಬಗ್ಗೆ ಗಾಸಿಪ್ ಮಾಡುತಿದ್ದಾಗ ಅವಳೇ ಬಂದು ನಮ್ಮ ಹತ್ರನೋಟ್ಸ್ ಕೇಳಿದ್ರೆ, ಇವರೆಲ್ಲಾ ಏನು ತಮಾಷೆ ಮಾಡ್ತಾರಪ್ಪ ಅಂತ ಭಯ ಇದ್ರು, ಇವಳು ನನ್ನ ಹತ್ರಾನೇ ನೋಟ್ಸ್ ಕೇಳಿದಾಳೆ ಅಂದ್ರೆ ಇವಳಿಗೆ ನಾನಂದ್ರೆ ಇಷ್ಟ ಅನ್ನೋಆಲೋಚನೆ ಕೊಡೋದು ಬೇರೆಯೇ ಖುಷಿ. ಬೆಳೀತಾ ಬೆಳೀತಾ ಈ ಸಣ್ಣ ಖುಷಿಗಳ ಮಧ್ಯದಲ್ಲೇ ಇದ್ದರೂ ದೊಡ್ಡದೇನೋ ಒಂದರ ಹುಡುಕಾಟದಲ್ಲಿ ಇದನ್ನೆಲ್ಲ ಅನಂದಿಸುವುದನ್ನುಮರೆತಿದ್ದೇವೆ.ಬೆಳೀತಾ ಬೆಳೀತಾ ಈ ಸಣ್ಣ ಖುಷಿಗಳ ಮಧ್ಯದಲ್ಲೇ ಇದ್ದರೂ ದೊಡ್ಡದೇನೋ ಒಂದರ ಹುಡುಕಾಟದಲ್ಲಿ ಇದನ್ನೆಲ್ಲ ಅನಂದಿಸುವುದನ್ನುಮರೆತಿದ್ದೇವೆ. ಬಸ್ಸಲ್ಲಿ, ಪಕ್ಕದಲ್ಲಿ ಮಗುವೊಂದು ನಮ್ಮನ್ನು ನೋಡಿ ನಕ್ಕಾಗ , ಆಟವಾಡಿಸಬೇಕು ಎಂದನಿಸಿದರೂ, ಎಲ್ಲಿ ಬೇರೆಯವರು ತಪ್ಪು ತಿಳಿಯುತ್ತಾರೋ ಎಂದುಕೊಳ್ಳುತ್ತಾಆಥವಾ ನಮ್ಮ ಆಫೀಸ್ ಟೆನ್ಶನ್ನಲ್ಲಿ ಅದರತ್ತ ನೋಡದೆ ಆ ಮಗು ಕೊಡುವ ಖುಷಿಯನ್ನು ಕಳಕೊಳ್ಳುತಿದ್ದೇವೆ! ಗೆಳೆಯನೊಬ್ಬ ಬಂದು ಶಭಾಷ್ ಎಂದಾಗ ಹೊಟ್ಟೆ ಉರಿಯಿಂದಹೇಳುತಿದ್ದಾನೆ ಅಂದುಕೊಳ್ಳುತ್ತಾ ಆ ಖುಷಿಯನ್ನುಕಳಕೊಂಡಿದ್ದೇವೆ.
ದುಡಿಯಬೇಕು, ದುಡ್ಡು ಮಾಡಬೇಕು, ಮನೆ ಕಟ್ಟಬೇಕು ಹೇಳ್ತಾ, ಸಂಸಾರ ಸುಖವನ್ನು ಮರೆತಿದ್ದೀವೆ. ನಮ್ಮೆಲ್ಲರ ಆ ‘ದೊಡ್ಡ ಖುಷಿ’ ಮರೀಚಿಕೆಯಂತೆ ಆಟವಾಡಿಸುತ್ತಾ ನಮ್ಮಿಂದದೂರ ಹುಚ್ಚು ಕುದುರೆಯಂತೆ ಓಡುತ್ತಿದೆ. ಅದನ್ನು ಬೆನ್ನಟ್ಟುವ ರಭಸದಲ್ಲಿ ನಮ್ಮ ನಗುವನ್ನೇ ನಾವು ಮರೆತಿದ್ದೇವೆ. ದುಡಿಯೋಣ ಆದರೆ ದಿನದ ನಗು, ಸಂತೋಷವನ್ನು ಮರೆತಲ್ಲ,ಜೀವನವೇ ಆಗಿರುವ ‘ಸಣ್ಣ ಸಣ್ಣ’ ಖುಷಿಗಳನ್ನು ಬಿಟ್ಟಲ್ಲ. ದಿನದಲ್ಲಿ ದುಡಿಯದೆ ಇರುವ ಸಮಯದಲ್ಲಾದರೂ ಮಕ್ಕಳಾಗಿರೊಣ.
ಹುಬ್ಬಳ್ಳಿಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಕ್ಯಾಮರಾ ಕಂಡು ನಗುತ್ತಾ ಓಡೋಡಿ ಬಂದ ಮಕ್ಕಳ ನಗುವೇ ನನ್ನೀ ಲೇಖನಕ್ಕೆ ಸ್ಪೂರ್ತಿ. ಆ ನಗುವಲ್ಲಿರೋ ಆನಂದ ನಾವಿಂದುಫೇಸ್ಬುಕ್ ಪ್ರೊಫೈಲ್ ಪಿಕ್ ಗಾಗಿ ನಗುವ ನಗುವಿನಲಿಲ್ಲ ಅನ್ನೋದು ನನ್ನ ಅನಿಸಿಕೆ. ನಗೋಣ ಮುಗ್ಧರಾಗಿರೊಣ.